ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಹಸುಗಳನ್ನು ತುಂಬಿಕೊಂಡು ಬಂದಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಇನ್ನು ಕಾರಿನಲ್ಲಿ ೬ ಹಸುಗಳನ್ನ ತುಂಬಿಕೊಂಡು ಬರುವಾಗ ವಾಹನ ಅಪಘಾತಕ್ಕೆ ಒಳಗಾಗಿ ೫ ಹಸುಗಳು ಸತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಒಂದು ಹಸು ಅರ್ಧ ಜೀವದಲ್ಲಿ ನರಳುತ್ತಿತ್ತು. ಅಂದಹಾಗೆ ಈ ವಾಹನ ಬರುವ ದಾರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ತಪಾಸಣೆ ಮಾಡುವ ೨ ಗೇಟ್ ಗಳು ಇದೆ. ಆದ್ರೂ ಅಧಿಕಾರಿಗಳ ಗಮನಕ್ಕೆ ಯಾಕೆ ಬಂದಿಲ್ಲ ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಜನ ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಾಯಿ ಬರದ ಮೂಕ ಪ್ರಾಣಿಗಳನ್ನು ಸಾಗಿಸುವಾಗ ಇಲ್ಲಿನ ಗೇಟ್ ಕಾಯುತ್ತಿದ ಅಧಿಕಾರಿಯವರು ಏನು ಮಾಡುತ್ತಿದ್ದರೂ ಈ ಮೂಕ ಪ್ರಾಣಿಗಳ ಸಾವಿಗೆ ಯಾರು ಕಾರಣ ? ಸಾವು ಮತ್ತು ಜೀವನದ ಮದ್ಯೆ ನರಳಾಡುತ್ತಿರುವ ಈ ಹಸು ಗರ್ಭಿಣಿಯಾಗಿರುದಾಗಿ ಮಾಹಿತಿ ಇದೆ. ಇನ್ನು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಇಲ್ಲಿಯ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ










