ಮಂಗಳೂರಿನ ಅತ್ತಾವರದಲ್ಲಿ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯ ಶವ ಪತ್ತೆ…

689
firstsuddi

ಮಂಗಳೂರು : ಅತ್ತಾವರ ಸಮೀಪದ ಮನೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಅಂಜನಾ ವಸಿಷ್ಟ(22) ಎಂದು ಗುರುತಿಸಲಾಗಿದೆ. ಉಜಿರೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇವರು ಒಂದು ವಾರದ ಹಿಂದೆ ಪ್ರಿಯಕರನ ಜೊತೆ ಬಂದು ಮನೆಯನ್ನು ಬಾಡಿಗೆ ಪಡೆದಿದ್ದರು ಎನ್ನಲಾಗಿದ್ದು, ಮಂಚದ ಸರಳುಗಳ ನಡುವೆ ಕುತ್ತಿಗೆ ಸಿಕ್ಕಿಹಾಕಿಕೊಂಡಿದ್ದು,

firstsuddi

ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಯುವತಿ ಚಿಕ್ಕಮಗಳೂರು ಜಿಲ್ಕೆಯ ತರೀಕೆರೆ ಮೂಲದವರು ಎಂದು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗಿದ್ದು, ಜೊತೆಯಲ್ಲಿದ್ದ ಪ್ರಿಯಕರ ಪರಾರಿಯಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.