ಮೂಡಿಗೆರೆ : ಮುಂಗಾರುಮಳೆ ಪ್ರಾರಂಭ : ಮಲೆನಾಡಿನಾದ್ಯಂತ ರಸಗೊಬ್ಬರಕ್ಕಾಗಿ ಮುಗಿಬಿದ್ದ ರೈತರು…

485
firstsuddi

ಮೂಡಿಗೆರೆ : ಮುಂಗಾರುಮಳೆ ಇನ್ನೆರಡು ದಿನಗಳಲ್ಲಿ ರಾಜ್ಯ ಪ್ರವೇಶಿಸಲಿದ್ದು ಮಲೆನಾಡಿನಾದ್ಯಂತ ರಸಗೊಬ್ಬರಕ್ಕಾಗಿ ರೈತರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಮಳೆ ಭೂಮಿ ಮತ್ತು ರೈತನಿಗೂ ಅನ್ಯೂನ್ಯವಾದ ಸಂಬಂಧವಿದ್ದು ಮುಂಗಾರುಮಳೆ ಬಿದ್ದೊಡನೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಈ ಬಾರಿಯ ಮುಂಗಾರು 15 ದಿನ ತಡವಾಗಿ ರಾಜ್ಯ ಪ್ರವೇಶಿಸಲಿದ್ದು ಈಗಾಗಲೇ ಕಾಫಿ, ಮೆಣಸು, ಅಡಿಕೆ ತೋಟಗಳಿಗೆ ರಸಗೊಬ್ಬರ ಹಾಕಲು ಉತ್ತಮ ಸಮಯವಾಗಿದ್ದು ರೈತರು ರಸಗೊಬ್ಬರವನ್ನು ಶೇಖರಣೆ ಮಾಡಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.
ಸಾಮಾನ್ಯವಾಗಿ ಮುಂಗಾರುಮಳೆಯೂ ಬಿಟ್ಟು ಬಿಟ್ಟು ಬರುವುದರಿಂದ ತೋಟಗಳಿಗೆ ರಸಗೊಬ್ಬರ ಹಾಕಲು ಉತ್ತಮ. ಮಳೆಗಾಲ ಶುರುವಾಗಿ ಹತ್ತು ದಿನ ಕಳೆದ ನಂತರ ಜಡಿಮಳೆ ಪ್ರಾರಂಭವಾಗುವುದರಿಂದ ಗೊಬ್ಬರ ಹಾಕಲು ಕಷ್ಟವಾಗುವುದರಿಂದ ಮಳೆಗಾಲದ ಪ್ರಾರಂಭದಲ್ಲೆ ರೈತರು ರಸಗೊಬ್ಬರ ಹಾಕುವ ಪದ್ದತಿ ಇದೆ.