ಕಡೂರು : ದೇವನೂರಿನಲ್ಲಿ ವಿಜೃಂಭಣೆಯಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ…

367
firstsuddi

ಕಡೂರು: 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ. ಇಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲಾಯಿತು. ತಾಲೂಕಿನ ದೇವನೂರಿನಲ್ಲೂ ಕೂಡಾ ವಿಜೃಂಭಣೆಯಿಂದ ಯೋಗ ದಿನವನ್ನ ಆಚರಿಸಿದರು. ಬಹಳ ಜೋರಾಗಿ ಯೋಗ ದಿನವನ್ನು ಆಚರಿಸಿದರು. ಜೈಮಿನಿ ಭಾರತ ರಚಿಸಿದ ಕವಿ ಲಕ್ಷ್ಮೀಶನ ಹುಟ್ಟೂರಾದ ದೇವನೂರಿನಲ್ಲಿರುವ ಕವಿ ಲಕ್ಷ್ಮೀಶನ ಹೆಸರಿನ್ನಲ್ಲಿರುವ ಶ್ರೀ ಲಕ್ಷ್ಮೀಶ ಸಂಯುಕ್ತ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ವಿಭಾಗ ಹಾಗೂ ಆರ್ ಎಸ್ ಎಸ್ ನ ಮಕ್ಕಳಿಂದ ಯೋಗಭ್ಯಾಸವನ್ನು ಮಾಡಲಾಯಿತು. ಗಿಡಕ್ಕೆ ನೀರನ್ನು ಹಾಕುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

firstsuddi

ಇನ್ನೂ ಶ್ರೀ ಲಕ್ಷ್ಮೀಶ ಸಂಯುಕ್ತ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದರು.ಸೂರ್ಯ ನಮಸ್ಕಾರದೊಂದಿದೆ ಪ್ರಾರಂಭವಾಗಿ ಭ್ರಮರಾಸನ, ಭಕಾಸನ, ಶಿರಸಾಸನ, ಮಯೂರಾಸನ, ಸರ್ವಾಂಗಾಸನಗಳ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಆಸನಗಳನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಜಿ.ಪಂ ಸದಸ್ಯ ಜಿ.ಎನ್. ವಿಜಯ್ ಕುಮಾರ್, ಚಿಕ್ಕದೇವನೂರು ರವಿ, ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ ನಿವೃತ್ತ ದಹಿಕ ಶೀಕ್ಷಕ ಎಸ್. ಲಕ್ಷ್ಮಣ್, ಕಲ್ಲೇಶ್ ಎಸ್,ಯತೀಶ್ ಗದ್ದೆಮನೆ, ಯೋಗೀಶ್ ಕಾಮೇನಹಳ್ಳಿ, ಸ್ವಾಮಿ ಎಸ್ ಕೊಪ್ಪಲು, ದಿನೇಶ್ ಎಸ್.ಡಿ, ನವೀನ್, ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.