ಹಾಸನ ನಗರಕ್ಕೆ ಎಂಟ್ರಿಕೊಟ್ಟ ಕಾಡಾನೆ…

564

ಹಾಸನ : ನಗರದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಹುಣಸಿನ ಕೆರೆ ಬಡಾವಣೆಯ ಕೆರೆಯ ಮಧ್ಯಭಾಗದಲ್ಲಿ ನಿಂತಿರುವ ಆನೆಯನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು, 15ದಿನಗಳ ಹಿಂದೆ ಸಾಲಗಾಮೆ ಸಮೀಪ ಕಾಡಾನೆ ಮಹಿಳೆಯನ್ನು ಕೊಂದಿತ್ತು. ಅದೇ ಆನೆ ಇಂದು ನಗರದಲ್ಲಿ ಪ್ರತ್ಯಕ್ಷವಾಗಿದ್ದು, ಕಾಡಂಚಿನ ಗ್ರಾಮದಲ್ಲಿ ಜನರ ನಿದ್ದೆ ಗೆಡಿಸಿದ್ದ ಕಾಡಾನೆಗಳು ಇದೇ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.