ಕೊಟ್ಟಿಗೆಹಾರ : ಮಹಾ ಮಳೆಯ ಪ್ರವಾಹದಿಂದ ಹಾನಿಯಾದ ಸಂತ್ರಸ್ತರಿಗೆ ಚಿಕ್ಕಾಬಳ್ಳಾಪುರ ಸಾರ್ವಜನಿಕರು ಟಿವಿ9 ದೃಶ್ಯ ಮಾದ್ಯಮದ ಸಹಯೋಗದೊಂದಿಗೆ ಆಹಾರ ಸಾಮಾಗ್ರಿ ಹಾಗೂ ದಿನೋಪಯೋಗಿ ವಸ್ತುಗಳನ್ನು ಸಾರ್ವಜನಿಕರ ಪರವಾಗಿ ಚಿಕ್ಕಮಗಳೂರು ಟಿವಿ9 ಪ್ರತಿನಿಧಿ ಪ್ರಶಾಂತ್ ಅವರು ಮಲ್ಲೆಮನೆ, ನಿಡುವಾಳೆ, ಮಾಗುಂಡಿ ಪರಿಹಾರ ಕೇಂದ್ರಕ್ಕೆ ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ರಾಘವೇಂದ್ರ, ಸಮಾಜ ಸೇವಕ ಫಿಶ್ ಮೋಣು, ನಳಂದ ಶಾಲೆಯ ಮುಖ್ಯಸ್ಥರಾದ ಗಣೇಶ್, ಪತ್ರಕರ್ತರಾದ ಕೊಟ್ಟಿಗೆಹಾರ ತನು, ಅನಿಲ್ ಮಂತಾರೋ, ಸುನಿಲ್ ಮೂಡಿಗೆರೆ ಹಾಗೂ ಸತೀಶ್ ಫಲ್ಗುಣಿ, ಬಾಳೂರು ನಾಗರಾಜ್, ಮನ್ಸೂರ್, ಸಚಿನ್ ಹಾಗೂ ಮಿಥುನ್ ಇದ್ದರು.










