ತುಮಕೂರು : ಹಿಂದೂ ಸಾದರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ರಾಜ್ಯದ ಜನರ ಸೇವೆ ಮಾಡಲು ನನಗೆ 3 ಬಾರಿ ಸಿಎಂ ಆಗುವ ಅವಕಾಶವಿತ್ತು. ಆದರೆ ಈ ರಾಜಕೀಯ ಚದುರಂಗದ ನಡುವೆ ನನಗೆ ಸಿಎಂ ಆಗುವ ಅವಕಾಶ ಕೈತಪ್ಪಿ ಹೋಯಿತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರು. ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡಬೇಕಾದರೆ ಜಾತಿ ಪ್ರಮುಖ ಪಾತ್ರವಹಿಸುತ್ತದೆ. ಅಧಿಕಾರದಲ್ಲಿರುವ ರಾಜಕಾರಣಿಗಳ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಅಧಿಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾಗಬೇಕು.ಹಾಗಾದರೆ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯ ಎಂದು ಹೇಳಿದರು.










