ಮೂಡಿಗೆರೆ : ಬೆಳೆಹಾನಿ ಸಹಾಯಧನಕ್ಕಾಗಿ ರೈತರು ಯಾವುದೇ ಇಲಾಖೆ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ : ತಹಾಸೀಲ್ದಾರ್ ರಮೇಶ್.

2032
firstsuddi

ಮೂಡಿಗೆರೆ : ತಾಲ್ಲೂಕಿನಾಧ್ಯಂತ ಪ್ರಕೃತಿ ವಿಕೋಪದಿಂದ ಬೆಳೆಹಾನಿಯಾಗಿದ್ದು, ರೈತರು ಬೆಳೆಹಾನಿ ಸಹಾಯಧನಕ್ಕಾಗಿ ಯಾವುದೇ ಇಲಾಖೆ ಕಚೇರಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ತಾಲ್ಲೂಕಿನಾಧ್ಯಂತ ಖುದ್ದು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖ ಅಧಿಕಾರಿಗಳು ಮತ್ತು ಕಾಫಿ ಬೋರ್ಡ್ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಲಿದ್ದು, ಈ ಸಮಯದಲ್ಲಿ ಬೆಳೆಹಾನಿಗೊಳಗಾದ ಸಂತ್ರಸ್ಥರು ತಮ್ಮ ತಮ್ಮ ಗ್ರಾಮದಲ್ಲೇ ಹಾಜರಿದ್ದು, ಸಂಬಂಧಿಸಿದ ಖಾತೆದಾರರ ಹೆಸರು ಮತ್ತು ವಿಳಾಸ ಹಾಗೂ ಆಧಾರ್ ಕಾರ್ಡ್ ವಿವರವನ್ನು ಮತ್ತು ಬ್ಯಾಂಕ್ ಖಾತೆ ವಿವರವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಒದಗಿಸಿ ಕೊಡತಕ್ಕದ್ದು. ಸಮೀಕ್ಷೆ ತಂಡ ಬಂದಾಗ ರೈತರು ಗ್ರಾಮದಲ್ಲೇ ಇದ್ದು ಸಂಬಂಧಿಸಿದ ಬೆಳೆಹಾನಿಯಾದ ಮಾಹಿತಿಯನ್ನು ನೀಡಲು ತಹಾಸೀಲ್ದಾರ್ ರಮೇಶ್ ತಿಳಿಸಿದ್ದಾರೆ.