ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಯುವಕ ಆತ್ಮಹತ್ಯೆ…

291
firstsuddi

ಬೆಂಗಳೂರು : ಖಾಸಗಿ ಚಾನಲ್‍ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಟಿಕ್ ಟಾಕ್ ವೀಡಿಯೋ ಮಾಡಿ ಯುವಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಕಿರಣ್ ಯಾಧವ್(22) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದ್ದು, ಕಿರಣ್ ಖಾಸಗಿ ಚಾನಲ್‍ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹೀರ ಆಗಬೇಕು ಎಂಬ ಕನಸನ್ನು ಕಂಡಿದ್ದನು. ಈ ವೇಳೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಮಧ್ಯವರ್ತಿಗಳು ಹೇಳಿದ ಮಾತನ್ನು ಕೇಳಿ ಕಿರಣ್ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾನೆ. ಕಿರಣ್ ನಿಂದ ಹಣ ಪಡೆದವರು ಕೊನೆ ಕ್ಷಣದವರೆಗೂ ಚಾನ್ಸ್ ಸಿಕ್ಕಿದೆ ಎಂದು ಹೇಳುತ್ತಿದ್ದರು. ಬಳಿಕ ಈ ಬಾರಿ ನಿನಗೆ ಚಾನ್ಸ್ ಸಿಗಲಿಲ್ಲ ನಿನ್ನ ಹಣವನ್ನು ವಾಪಸ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಕಿರಣ್ ಬುಧವಾರ ರಾತ್ರಿ ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿ ಟಿಕ್ ಟಾಕ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿಕ್ ಟಾಕ್ ವೀಡಿಯೋದಲ್ಲಿ ಹಾಯ್ ಫ್ರೆಂಡ್ಸ್ ನಾನು ಕಿರಣ್ ಯಾದವ್ ನನ್ನ ತಾಯಿಗೆ ನಾನೊಬ್ಬನೇ ಮಗ. ನನ್ನ ಅಮ್ಮನ ನಿಮ್ಮ ಅಮ್ಮ ಎಂದು ನೋಡಿಕೊಳ್ಳಿ. ಇನ್ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಎಂದು ನಾನು ಹೇಳುವುದಿಲ್ಲ. ಇದು ನನ್ನ ಕೊನೆಯ ಟಿಕ್ಟಾಕ್ ವಿಡಿಯೋ. ಹಾಗಾಗಿ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾನೆ.