ಬೆಂಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಾಲ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮ್ಮನ್ಸ್ ಜಾರಿ ಮಾಡಿದ್ದು, ಈ ಹಿನ್ನೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವ ಮೊದಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲದ ಬಗ್ಗೆ ವಿಚಾರಣೆ ಮಾಡುವ ಸಾದ್ಯತೆ ಇದೆ. ಸಾಲ ನೀಡುವುದರಲ್ಲಿ ತಪ್ಪೇನು ಇಲ್ಲ. ಸಾಲ ನೀಡುವಾಗ ಪ್ರೊಮೋಟರ್ಸ್ ಈಕ್ವಿಟಿ ಎಂದು ಹಣವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ. ಹೀಗಾಗಿ ಪ್ರೊಮೋಟರ್ಸ್ ಈಕ್ವಿಟಿ ಬಗ್ಗೆ ಕೇಳುವ ಸಾದ್ಯತೆ ಇದೆ. ನನಗೆ ಗೊತ್ತಿರುವ ಮಾಹಿತಿಯನ್ನು ಕೊಡುತ್ತೇನೆ. ವಿಚಾರಣೆ ಮಾಡುವುದರ ಬಗ್ಗೆ ನನಗೆ ಯಾವಾ ಭಯವೂ ಇಲ್ಲ. ತಪ್ಪು ಮಾಡಿರುವವರು ಹೆದರುತ್ತಾರೆ. ನಾನು ಎಂಥಹಾ ವ್ಯಕ್ತಿ ಎಂಬುವುದು ಜನರಿಗೆ ಗೊತ್ತು. ನನ್ನ ವ್ಯವಹಾರವೂ ಕೂಡಾ ಪಾರದರ್ಶಕವಾಗಿದೆ. ಹೀಗಾಗಿ ಭಯಪಡುವ ಅಗತ್ಯವೇ ಇಲ್ಲ ಎಂದರು.










