ಚಿಕ್ಕಮಗಳೂರು : ಬಾಳೆಹೊನ್ನೂರು ಸೇತುವೆಯ ಪರಿವೀಕ್ಷಣೆ ನಡೆಸುತ್ತಿರುವ ತಜ್ಞರು-3 ಗಂಟೆ ವಾಹನ ಸಂಚಾರ ನಿಷೇಧ…

746
firstsuddi

ಚಿಕ್ಕಮಗಳೂರು : ಬಾಳೆಹೊನ್ನೂರು ಭದ್ರಾ ಸೇತುವೆಯಲ್ಲಿ ಬಿರುಕು ಬಿದ್ದ ಹಿನ್ನೆಲೆ, ಸೇತುವೆಯ ಪರಿವೀಕ್ಷಣೆ ನಡೆಸುತ್ತಿರುವ ತಜ್ಞರು ಸೇತುವೆಯ ಸಾಮರ್ಥ್ಯದ ಬಗ್ಗೆ Bridge Testing Machine ಬಳಸಿ ಟೆಸ್ಟಿಂಗ್ ನಡೆಸುತ್ತಿರುವುದರಿಂದ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆ-ಬೈಂದೂರು ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿಯುವ ಹಂತದಲ್ಲಿರುವುದರಿಂದ ಅಧಿಕಾರಿಗಳು ಪರಿವೀಕ್ಷಣೆ ಮಾಡುತ್ತಿದ್ದು, ಹೀಗಾಗಿ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶ ಹೊರಡಿಸಿದ್ದಾರೆ.