ಉಪಕದನಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…

428
firstsuddi

ಬೆಂಗಳೂರು : ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ, ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ಜೆಡಿಎಸ್ ಅನರ್ಹ ಶಾಸಕರಿಂದ ತೆರವಾಗಿರುವ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಉಳಿದ 5ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ನಾಳೆ ಘೊಷಣೆ ಮಾಡಲಿದೆ.
• ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ಕ್ಷೇತ್ರ – ಚೈತ್ರಾ ಗೌಡ. ಎ
• ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರ – ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ
• ರಾಣೆ ಬೆನ್ನೂರು ಕ್ಷೇತ್ರ – ಮಲ್ಲಿಕಾರ್ಜುನ ಹಲಗೇರಿ
• ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರ – ಮಾಜಿ ಸಚಿವ ಎಂ, ನಬಿ,
• ಚಿಕ್ಕಬಳ್ಳಾಪುರ ಕ್ಷೇತ್ರ – ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ
• ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರಂ ಕ್ಷೇತ್ರ – ಸಿ. ಕೃಷ್ಣಮೂರ್ತಿ,
• ಯಶವಂತಪುರ ಕ್ಷೇತ್ರ – ಟಿ.ಎನ್. ಜವರಾಯಿಗೌಡ,
• ಶಿವಾಜಿನಗರ ಕ್ಷೇತ್ರ – ತನ್ವೀರ್ ಅಹಮ್ಮದ್ವುಲ್ಲಾ ಅವರಿಗೆ ಟಿಕೆಟ್ ನೀಡಲಾಗಿದೆ.
• ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರ – ದೇವರಾಜ್ ಬಿ.ಎಲ್.
• ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರ – ಸೋಮಶೇಖರ್