ಮೂಡಿಗೆರೆ : ಜೀಪಿಗೆ ಅಡ್ಡ ಬಂದ ಕೋಣದೊಂದಿಗೆ ನಾಯಿಯ ಕಾದಾಟ-ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್…

591

ಮೂಡಿಗೆರೆ : ಜೀಪಿಗೆ ಅಡ್ಡ ಬಂದ ಕಾಡು ಕೋಣದೊಂದಿಗೆ ನಾಯಿ ಕಾದಾಟ ನಡೆಸಿರುವ ಘಟನೆ ತಾಲ್ಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಮಾಲೀಕ ತನ್ನ ನಾಯಿಯೊಂದಿಗೆ ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡು ಕೋಣವೊಂದು ಜೀಪಿಗೆ ಅಡ್ಡ ಬಂದು ನಿಂತಿದ್ದು, ಇದನ್ನು ಗಮನಿಸಿದ ನಾಯಿ ಕಾಡು ಕೋಣದೊಂದಿಗೆ ಕಾದಾಟ ನಡೆಸಿದೆ. ನಾಯಿ ಹಾಗೂ ಕೋಣದ ನಡುವಿನ ಕಾದಾಟ ಹೆಚ್ಚಾಗುತ್ತಿದ್ದಂತೆ ಮಾಲೀಕ ತನ್ನ ನಾಯಿಯನ್ನು ವಾಪಸ್ ಕರೆದಿದ್ದಾರೆ. ಮಾಲೀಕ ಕರೆದರೂ ನಾಯಿ ಹಿಂದಿರುಗದೇ ಕೋಣದೊಂದಿಗೆ ಕಾದಾಟ ನಡೆಸಿದ್ದು, ನಾಯಿಯ ಕಾದಾಟ ನೋಡಿ ಕಾಡುಕೋಣ ಕೆಲಕಾಲ ಮಂಕಾಗಿ ನಿಂತಿತ್ತು. ಕಾದಾಟದ ವೇಳೆ ನಾಯಿ ಕಾಡುಕೋಣವನ್ನು ಒಂದು ಹೆಜ್ಜೆ ಮುಂದೆ ಹಿಡಲು ಬಿಡದೇ ರಸ್ತೆಯಿಂದ ಓಡಿಸಿದ್ದು, ನಾಯಿ ಹಾಗೂ ಕಾಡಿಕೋಣದ ಕಾದಾಟದ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.