ಮೂಡಿಗೆರೆ : ಬಿನ್ನಡಿ ಗ್ರಾಮದಲ್ಲಿ ವಿಚಿತ್ರ ಕರು ಜನನ…

919
firstsuddi

ಮೂಡಿಗೆರೆ : ತಾಲ್ಲೂಕಿನ ಬಣಕಲ್ ಸಮೀಪದ ಬಿನ್ನಡಿ ಗ್ರಾಮದ ಸುರೇಶ್ ಎಂಬುವವರ ಮನೆಯಲ್ಲಿ ವಿಚಿತ್ರ ರೂಪದ ಕರುವೊಂದು ಜನಿಸಿದ್ದು, ಕರುವಿನ ನಾಲಿಗೆ ಹೊರ ಚಾಚಿದ್ದು ಸೀಳುತುಟಿ ಹೊಂದಿದ್ದು, ಕಾಲುಗಳು ಬಲಹೀನವಾಗಿದ್ದು, ಸುರೇಶ್ ಅವರ ಮನೆಯ ಕೆಂಪಿ ಎಂಬ ಹೆಸರಿನ ಹಸು ಇಂದು ಬೆಳಿಗ್ಗೆ ಕರುವಿಗೆ ಜನ್ಮ ನೀಡಿದ್ದು ಅಂಗವೈಕಲ್ಯದಿಂದ ಕೂಡಿದ ಕರುವಿಗೆ ಸುರೇಶ್ ಅವರೇ ಹಸುವಿನ ಬಳಿ ನಿಧಾನಕ್ಕೆ ಕರೆದೊಯ್ದು ಹಸುವಿನ ಹಾಲು ಕುಡಿಸಿದ್ದಾರೆ. ಎದ್ದು ನಿಲ್ಲರಾದಷ್ಟು ಬಲಹೀನವಾಗಿರುವ ಕರು ಹಾಲು ಕುಡಿಯುತ್ತಿದ್ದರೆ ಕೆಲ ದಿನಗಳಲ್ಲಿ ಎದ್ದು ನಿಲ್ಲಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದ್ದು, ವಿಚಿತ್ರ ಮುಖ ಹೊಂದಿರುವ ಕರು ಜನಿಸಿರುವ ವಿಷಯ ತಿಳಿಯುತ್ತಿದ್ದಂತೆ ಕುತೂಹಲದಿಂದ ಅಕ್ಕ ಪಕ್ಕದ ಮನೆಯವರು ಕರುವನ್ನು ವೀಕ್ಷಿಸಲು ಬರುತ್ತಿರುವ ದೃಶ್ಯ ಸುರೇಶ್ ಅವರ ಮನೆಯಲ್ಲಿ ಕಂಡು ಬಂತು.