ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ-180 ಮಂದಿ ಪ್ರಯಾಣಿಕರು ಸಾವು…

641
firstsuddi

ಟೆಹ್ರಾನ್ : ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನವೊಂದು ಪತನವಾಗಿ 180 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಇರಾನ್‍ನ ಟೆಹ್ರಾನ್ ಬಳಿ ನಡೆದಿದೆ. ಸುಮಾರು 180 ಮಂದಿ ಪ್ರಯಾಣಿಕರಿದ್ದ ವಿಮಾನ ಟೆಹ್ರಾನ್‍ನ ಇಮಾಮ್ ಖೊಮೈನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನವಾಗಿದ್ದು, ಪರಿಣಾಮ ವಿಮಾನದಲ್ಲಿದ್ದ 180 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಹುದು ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಈ ಸಂಬಂಧ ತನಿಖೆ ಆರಂಭಗೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಬೇಕಿದೆ.