ಗದಗ ಜಿಲ್ಲೆಯ 2ನೇ ತರಗತಿ ವಿದ್ಯಾರ್ಥಿನಿಗೆ ಒಲಿದ ಗೌರವ ಡಾಕ್ಟರೇಟ್ ಪ್ರಶಸ್ತಿ…

1162
firstsuddi

ಗದಗ : ಜಿಲ್ಲೆಯ ನರಗುಂದ ಪಟ್ಟಣದ ಸರ್.ಎಂ ವಿಶ್ವೇಶ್ವರಯ್ಯ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿಗೆ ತಮಿಳುನಾಡು ಯುನಿವರ್ಸಲ್ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಿದೆ. ವೈದೃತಿ ಕೋರಿಶೆಟ್ಟರ್ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿನಿ. ವೈದೃತಿ ಕೋರಿಶೆಟ್ಟರ್ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ರಾಜ ಮಹಾರಾಜರ ಆಳ್ವಿಕೆಯ ಕುರಿತು ಕೇಳುವ ಪ್ರಶ್ನೆಗಳಿಗೆ ತಪ್ಪಿಲ್ಲದೆ ಪಟಾಪಟನೆ ಉತ್ತರಿಸಿದ್ದಾರೆ. ಹೀಗಾಗಿ ಬಾಲಕಿಯ ಈ ಸಾಧನೆಯನ್ನು ಗುರುತಿಸಿ ತಮಿಳುನಾಡಿನ ಮಧುರೈನಲ್ಲಿ ನಡೆಯುವ ಯುನಿವರ್ಸಲ್ ವಿವಿ ಘಟಿಕೋತ್ಸವವದಲ್ಲಿ ಇಂದು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದ್ದಾರೆ. ಅಲ್ಲದೇ ವೈದೃತಿ ಅವರಿಗೆ ಕರ್ನಾಟಕ ದರ್ಶನ ಮಾಸಪತ್ರಿಕೆ ಸೇವಾ ಅಭಿವೃದ್ಧಿ ಸಂಸ್ಥೆ ನೀಡುವ ಕರ್ನಾಟಕ “ಜ್ಞಾನಚಕ್ರವರ್ತಿ” ರಾಷ್ಟ್ರೀಯ ಪ್ರಶಸ್ತಿ, ಕರುನಾಡು ರಾಜ್ಯೋತ್ಸವ, ಸಂಗೊಳ್ಳಿ ರಾಯಣ್ಣ ಗೌರವ ಪ್ರಶಸ್ತಿ, ವಿಕ್ರಮಾದಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.