ಚಿಕ್ಕಮಗಳೂರು : ಅಂಚೆ ಇಲಾಖೆ ಆಯೋಜಿಸಿರುವ ಎರಡು ದಿನಗಳ ಕಾಲದ ಆಧಾರ್ ಮೇಳ ಆರಂಭ…

300
firstsuddi

ಚಿಕ್ಕಮಗಳೂರು : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯ ಅಂಚೆ ಅಧೀಕ್ಷಕರ ಕಛೇರಿ ಆವರಣದಲ್ಲಿ ಅಂಚೆ ಇಲಾಖೆ ಆಯೋಜಿಸಿರುವ ಎರಡು ದಿನಗಳ ಕಾಲದ ಆಧಾರ್ ಮೇಳ ಇಂದು ಆರಂಭಗೊಂಡಿತು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅಂಚೆ ಅಧೀಕ್ಷಕ ಬಿ.ಶಂಕರ್ ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಸಾರ್ವಜನಿಕರು ಪರದಾಡುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಈ ಮೇಳದಲ್ಲಿ ಎರಡು ದಿನಗಳ ಕಾಲ ಹೊಸ ಆಧಾರ್ ನೋಂದಣಿ, ವಿಳಾಸ ಬದಲಾವಣೆ, ಬೆರಳಚ್ಚು ಪರಿಷ್ಕರಣೆ, ಮೊಬೈಲ್ ಸಂಖ್ಯೆಯ ತಿದ್ದುಪಡಿ ಸೇರಿದಂತೆ ಅನೇಕ ತಿದ್ದುಪಡಿಯನ್ನು ಅತ್ಯಂತ ಶೀಘ್ರ ಮತ್ತು ಸುಲಭವಾಗಿ ಸಾರ್ವಜನಿಕರು ಮಾಡಿಸಬಹುದು ಎಂದು ತಿಳಿಸಿದರು.
ಇದರ ಜೊತೆಗೆ ಸುಕನ್ಯಾ ಸಮೃದ್ದಿ ಯೋಜನೆ, ಅಂಚೆ ವಿಮೆ ಸೇರಿದಂತೆ ಇಲಾಖೆಯಲ್ಲಿರುವ ಸೇವೆಗಳ ಬಗ್ಗೆ ಮೇಳದಲ್ಲಿ ನಾಗರೀಕರಿಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಮೇಳದಲ್ಲಿ ಮೂರು ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿದ್ದು, 10 ಜನ ಸಿಬ್ಬಂಧಿ ಬೆಳಗಿನಿಂದ ಸಂಜೆಯವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಆಧಾರ್ ಮೇಳವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು, ಬೆಳಗಿನಿಂದ ಸಂಜೆಯವರೆಗೆ 200 ಕ್ಕೂ ಅಧಿಕ ಸಾರ್ವಜನಿಕರು ಸರತಿ ಸಾಲಿನಲ್ಲಿ ಸಾಗಿ ಆಧಾರ್ ತಿದ್ದುಪಡಿಯನ್ನು ಮಾಡಿಸಿದರು.
ಸಹಾಯಕ ಅಂಚೆ ಅಧೀಕ್ಷಕರಾದ ರಾಧಾಕೃಷ್ಣ ಮಲ್ಯ, ಚಂದ್ರಶೇಖರ್, ಇಲಾಖೆಯ ಮಾರುಕಟ್ಟೆ ಅಧಿಕಾರಿ ಹೆಚ್.ಜೆ.ದೊಡ್ಡೇಶ್, ಉಪ ಅಂಚೆಪಾಲಕ ಕೆ.ಆರ್.ಸುರೇಶ್, ಲೋಹಿತ್ ಕುಮಾರ್, ಕೆ.ಎಂ.ಮಂಜುನಾಥ್ ಹಾಜರಿದ್ದರು.