ಮೂಡಿಗೆರೆ : ಜಾವಳಿಯ ಹೇಮಾವತಿ ನದಿಮೂಲ ಶ್ರೀ ಮಹಾಗಣಪತಿ ಉತ್ಸವ ಸಂಭ್ರಮದಿಂದ ನೆರೆವೇರಿತು.
ಬೆಳಗ್ಗೆ 8ಗಂಟೆಯಿಂದ ವಿವಿಧ ಪ್ರಾಕರದ ಪೂಜಾ ಕೈಂಕರ್ಯಗಳು ನೆರವೇರಿದವು. ಮಹಾಗಣಪತಿ ಹೋಮ,ಪೂಜೆ ಪಲ್ಲಕ್ಕಿ ಉತ್ಸವ ನೆರವೇರಿದವು. ದೇವಸ್ಥಾನದಿಂದ ಮಂಜಿನಕಟ್ಟೆಯವೆರೆಗ ಪಲ್ಲಕ್ಕಿ ಉತ್ಸವ ನೆರವೇರಸಲಾಯಿತು. ಉತ್ಸವದ ಪ್ರಯುಕ್ತ ದೇವಸ್ಥಾನದ ಆವರಣವನ್ನು ತಳಿರು ತೋರಣಗಳಿಂದ ಮತ್ತು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಜಾವಳಿ, ನಿಡುವಾಳೆ, ವಾಟೇಕಾನ್,ಮಲೆಮನೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಮಧ್ಯಾಹ್ನ ಬಂದಿದ್ದ ಭಕ್ತಾಧಿಗಳಿಗೆ ರುಚಿಕರವಾದ ಅನ್ನ ಸಂತರ್ಪಣೆ ಏರ್ಪಾಡು ಮಾಡಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ತಾ.ಪಂ. ಸದಸ್ಯರುಗಳಾದ ವೇದಾಲಕ್ಷ್ಮಣ್, ಬಿ.ಎಸ್.ಲಕ್ಷ್ಮಣ್ಗೌಡ, ಜಿ.ಪಂ. ಸದಸ್ಯ ಶಾಮಣ್ಣ ಸೇರಿದಂತೆ ಹಲವು ಮುಖಂಡರು ಉತ್ಸವದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು. ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಗುರ್ಜಾರ್,ಉಪಾಧ್ಯಕ್ಷ ಯಶವಂತ್ ಗುರ್ಜಾರ್, ಕಾರ್ಯದರ್ಶಿ ಜಗದೀಶ್, ಸದಸ್ಯರುಗಳಾದ ಶಶಿಧರ್, ಚನ್ನಕೇಶವ ಗೌಡ, ಗಣಪತಿ ಆಚಾರ್, ಉಮೇಶ್, ಪ್ರದೀಪ್, ಸುರೇಶ್ ಗೌಡ, ಜಾವಳಿ ಪರೀಕ್ಷಿತ್ ಇದ್ದರು.










