ಚಿಕ್ಕಮಗಳೂರು : ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇತ್ರಾವತಿ ದೇವರಾಜ ಅರಸ್ ಅವಿರೋಧ ಆಯ್ಕೆ…

293
firstsuddi

ಚಿಕ್ಕಮಗಳೂರು : ತಾಲ್ಲೂಕಿನ ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇತ್ರಾವತಿ ದೇವರಾಜ ಅರಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಚಂದ್ರಮ್ಮ ಅವರ ವಿರುದ್ದ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಕೈಗೊಂಡು ಅವರನ್ನು ಪದಚ್ಯುತಿಗೊಳಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ನೇತ್ರಾವತಿ ದೇವರಾಜ ಅರಸ್ ಅವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹೆಚ್.ಡಿ.ರೇವಣ್ಣ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣೆ ನಂತರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು, ಗ್ರಾ.ಪಂ. ಉಪಾಧ್ಯಕ್ಷೆ ಮೈನಾ ಮಂಜುನಾಥ್, ಸದಸ್ಯರಾದ ಜಿ.ಪಿ.ಮೀನಾ ನಾಗೇಶ್‍ಗೌಡ, ಆರ್.ಸುಶೀಲಾ, ವಿನೋದ ಗೋಪಿನಾಥ್, ಕೆ.ಪಿ.ಹನೀಫ್, ವಾಜೀದ್ ಅಹಮದ್, ಶಿವಕುಮಾರ್, ಎಂ.ಎಸ್.ಮಂಜುನಾಥ್, ಎಸ್.ರಾಜು, ಎನ್.ಎನ್.ರಂಗನಾಥ್, ಸಿ.ಎನ್.ದೇವರಾಜ ಅರಸ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಆರ್.ಲಾಸ್ಯ ಹಾಜರಿದ್ದರು.