ಮೂಡಿಗೆರೆ : ಬಿಎಸ್‍ಎನ್‍ಎಲ್ ಕಛೇರಿಯಲ್ಲಿ ನೌಕರರಿಗೆ ಬೀಳ್ಕೊಡುಗೆ ಕಾರ್ಯಕ್ರಮ…

446
firstsuddi

ಮೂಡಿಗೆರೆ : ಕಾಯಕ ಅಳಿದ ಮಾತ್ರಕ್ಕೆ ಗೌರವ ಕುಂದುವುದಿಲ್ಲ. ನಿವೃತ್ತಿ ಸಹಜವಾಗಿದ್ದು, ಸಂಸ್ಥೆಯು ನಷ್ಟದಲ್ಲಿರುವುದರಿಂದ ಕಾರ್ಮಿಕರ ಬದುಕಿಗೂ ತೊಂದರೆಯಾಗಿದೆ. ನಿವೃತ್ತಿ ಘೋಷಣೆಯ ನೌಕರರ ಜೀವನವು ಸುಖಮಯವಾಗಲಿ ಎಂದು ಬಿಎಸ್‍ಎನ್‍ಎಲ್ ಕಿರಿಯ ಅಭಿಯಂತರ ಅಶೀಶ್ ಹೇಳಿದರು.
ಎಲ್ಲಾ ಕಾರ್ಮಿಕರಿಗೂ ಸ್ವಯಂ ನಿವೃತ್ತಿ ಘೋಷಣೆ ಆದೇಶದ ಹಿನ್ನಲೆಯಲ್ಲಿ ಮೂಡಿಗೆರೆ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ನಡೆದ 50 ವರ್ಷದ ಮೇಲಿನ ಮೂಡಿಗೆರೆ ತಾಲ್ಲೂಕಿನ 18 ಮಂದಿ ನೌಕರರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸಂಸ್ಥೆಯಲ್ಲಿ ದುಡಿದರೂ ನಿವೃತ್ತಿ ಸಹಜವಾಗಿದೆ. ಸಂಸ್ಥೆಯಲ್ಲಿ ಅವದಿ ಮುಗಿಯದೇ ಸ್ವಯಂ ನಿವೃತ್ತಿ ಘೋಷಣೆಯ ಆದೇಶ ದೌರ್ಭಾಗ್ಯವಾಗಿದ್ದು, ಆಧುನೀಕತೆಯ ತಾಂತ್ರಿಕತೆಗೆ ಹೊಂದಿಕೊಂಡು ಯಾರಿಗೂ ಊಹಿಸಲಾಗದ ಪರಿಸ್ಥಿತಿ ಬರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಸಂಸ್ಥೆಯಲ್ಲಿ ಹಲವಾರು ವರ್ಷ ಸೇವೆ ನೀಡಿರುವುದು ಶ್ಲಾಘನೀಯ ಎಂದರು.
ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಬಸವರಾಜ್ ಅತಡ್ಕರ್ ಮಾತನಾಡಿ ಬೀಳ್ಕೊಡುಗೆ ಕೊಡಲು ಕೂಡ ಹಿರಿಯ ಅನುಭವಿ ಅದಿಕಾರಿಗಳು ಇಲ್ಲದೇ ನೌಕರನ ಪರಿಶ್ರಮವನ್ನು ಗೌರವಿಸುವ ಔದಾರ್ಯವು ಇಲ್ಲದಂತಾಗಿದೆ. ಏಕೆಂದರೆ ಚಿಕ್ಕಮಗಳೂರಿನಲ್ಲಿ 143 ಮಂದಿ, ಮೂಡಿಗೆರೆ, ಕಳಸದಲ್ಲಿ ಒಟ್ಟು 18 ಮಂದಿ ಸ್ವಯಂ ನಿವೃತ್ತಿ ಘೋಷಿಸಿ ಮನೆಗೆ ಸಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿ ಎಂದರು.
ಕರವೇ ಮಾಜಿ ಅಧ್ಯಕ್ಷೆ ರೇಣುಕಾಪರಮೇಶ್ ಮಾತನಾಡಿ, ಈಗ ಸ್ವಯಂ ನಿವೃತ್ತಿ ಆಗುತ್ತಿರುವ ನೌಕರರು ಸುಮಾರು 40 ವರ್ಷಗಳಿಂದಲೂ ಕಠಿಣ ಪರಿಶ್ರಮ ಮಾಡಿಕೊಂಡು ಬಂದಿದ್ದು, ಆಧುನೀಕತೆಯ ವ್ಯವಸ್ಥೆಯಲ್ಲಿ ಎಲ್ಲವೂ ತಂತ್ರಜ್ಞಾನದ ಮೂಲಕ ಸಂಸ್ಥೆ ಸಾಗಿರುವುದರಿಂದ ನೌಕರರಿಗೆ ನಿವೃತ್ತಿಯ ದೌರ್ಭಾಗ್ಯ ಬರಬಾರದಿತ್ತು. ನಿವೃತ್ತರು ಕುಟುಂಬದೊಂದಿಗೆ ಸಮಯ ನೀಡಿ ನೌಕರ ಜೀವನದ ಬಾಳನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಎಸ್‍ಎನ್‍ಎಲ್ ಕಿರಿಯ ಅಭಿಯಂತರ ಸಂತೋಷ್, ಮೂಡಿಗೆರೆಯ ನೌಕರರಾದ ಚನ್ನಪ್ಪ, ತಾರಾನಾಥ್, ವಿವಿಯನ್ ವಾಸ್, ಕೆ.ಪಿ.ರಾಮಚಂದ್ರ, ಬಿ.ಎನ್.ಪರಮೇಶ್, ಚಂದ್ರಶೇಖರ್, ಎಸ್.ಮಂಜುನಾಥ್, ಬಾಲಕೃಷ್ಣ, ಗೋಪಾಲ್‍ಗೌಡ, ಜಿ.ಡಿ.ಚಂದ್ರೇಗೌಡ, ಬಿ.ಎ.ರವಿ, ಹೆಚ್.ಬಿ.ಗೋಪಾಲ್, ಕಳಸದ ಕನಕರಾಜ್, ಜನಾರ್ಧನ್, ಆನಂದರಾಮ್, ವೆಂಕಟೇಶ್, ನಾಗೇಂದ್ರ ಮೂಲೆಮನಿ, ಲಕ್ಷ್ಮಿನಾರಾಯಣ್ ಅವರಿಗೆ ಉತ್ತಮ ಸೇವೆಗಾಗಿ ಕಿರಿಯ ಅಧಿಕಾರಿಗಳಾದ ಆಶೀಶ್,ಸಂತೋಷ್ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತರ ಕುಟುಂಬದ ಸದಸ್ಯರು, ವಲೇರಿಯನ್ ಪಿಂಟೊ, ಜನಾರ್ಧನ್, ಸೋಮನಾಥ್, ನಂಜುಂಡಸ್ವಾಮಿ, ಕುಶಾಲಪ್ಪ, ಸಾಗರ್, ಮೊಗಣ್ಣ, ಬೀರೇಗೌಡ ಇದ್ದರು.