ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಸಾವು-ಪ್ರಯಾಣಿಕರು ಪ್ರಾಣಪಾಯದಿಂದ ಪಾರು…

704
firstsuddi

ಶಿವಮೊಗ್ಗ : ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆಂಗಟ್ಟೆ ಗ್ರಾಮದ ಬಳಿ ನಡೆದಿದೆ. ಶಿಕಾರಿಪುರ ತಾಲ್ಲೂಕಿನ ಬಗನಗಟ್ಟೆ ಗ್ರಾಮದ ನಿವಾಸಿ ಕುಮಾರ್(32) ಮೃತ ದುರ್ಧೈವಿ ಎಂದು ಗುರುತಿಸಲಾಗಿದ್ದು, ಕುಮಾರ್ ಅವರು ಕುಮದ್ವತಿ ಟ್ರಾವೆಲ್ಸ್ ಗೆ ಸೇರಿದ್ದ ಖಾಗಿ ಬಸ್ ಚಾಲಕನಾಗಿದ್ದು, ಶಿಕಾರಿಪುರದಿಂದ ಹೊನ್ನಾಳಿ ಕಡೆಗೆ ತೆರಳುತ್ತಿದ್ದ ವೇಳೆ ಕೆಂಗಟ್ಟೆ ಗ್ರಾಮದ ಬಳಿ ಕುಮಾರ್ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಚಾಲಕ ಕುಮಾರ್ ಅವರು ರಸ್ತೆ ಪಕ್ಕದಲ್ಲಿ ಮರಕ್ಕೆ ಬಸ್‍ನ್ನು ಡಿಕ್ಕಿ ಹೊಡೆಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದು, ದುರಾದೃಷ್ಟವಶಾತ್ ಚಾಲಕ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.