ಚಿಕ್ಕಮಗಳೂರು : ನಗರದ ಬಸವನಹಳ್ಳಿ ಶಾಲೆಯ ಮುಂಭಾಗ ರಾತ್ರಿ ವೇಳೆ ಗೂಳಿಗಳ ಭರ್ಜರಿ ಕಾಳಗ ನಡೆದಿದ್ದು, ಸ್ಥಳೀಯರಿಗೆ ಒಂದೆಡೆ ಮನೋರಂಜನೆ, ಮತ್ತೊಂದೆಡೆ ಆತಂಕ ಉಂಟಾಗಿತ್ತು. ಅಲ್ಲದೇ ಗೂಳಿ ಕಾಳಗದಲ್ಲಿ ಬೈಕ್, ಓಮ್ನಿ ಕಾರು ಹಾಗೂ ಪಾನಿಪುರಿ ಅಂಗಡಿಗಳಿಗೆ ಹಾನಿಯಾಗಿದ್ದು, ಕಲ್ಲಿನಿಂದ ಹೊಡೆದರೂ ಹಾಗೂ ಗೂಳಿಗಳ ಮೇಲೆ ನೀರನ್ನು ಎರಚಿದರೂ ಕ್ಯಾರೆ ಎನ್ನದೆ ಗೂಳಿಗಳು ಒಂದು ಗಂಟೆ ಕಾಲ ರಸ್ತೆ ತುಂಬಾ ಕಾಳಗ ನಡೆಸಿದ್ದು, ಬಳಿಕ ಸ್ಥಳೀಯರು ಮರದ ಪೋಲ್ಸ್ ತಂದು ಗೂಳಿಗಳನ್ನು ಓಡಿಸಿದ್ದಾರೆ.









