ಚಾಲಕನ ನಿಯಂತ್ರ ತಪ್ಪಿ ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್-7 ಮಂದಿ ಧಾರುಣ ಸಾವು…

248
firstsuddi

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಸೇತುವೆ ಮೇಲಿಂದ ಬಿದ್ದು 7ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ. ಗುಲಾಬಿ ಹುಣಸಿಕಟ್ಟಿ(35), ಶೇಖಪ್ಪಾ ಕೆದಾರಿ(37), ಶಾಂತವ್ವಾ (63), ಶಾಂತವ್ವಾ ಅಳಗೋಡಿ(68), ನೀಲವ್ವಾ ಮುತ್ನಾಳ್, ತಂಗೆವ್ವ ಹುಣಸಿಕಟ್ಟಿ ಹಾಗೂ ಅಶೋಕ್ ಕೇದಾರಿ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ ಟ್ರ್ಯಾಕ್ಟರ್‍ನಲ್ಲಿ ಬೇಗೂರ ಗ್ರಾಮದಿಂದ ಇಟಗಿ ಕಡೆಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದ ವೇಳೆ ಇಟಗಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಮೂವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.