ಚಿಕ್ಕಮಗಳೂರು : ಯುವಕನೋರ್ವ ಮನಬಂದಂತೆ ಸಿಕ್ಕ ಸಿಕ್ಕವರ ಮೇಲೆ ಕಾರು ಚಲಾಯಿಸಿರುವ ಘಟನೆ ತಾಲ್ಲೂಕಿನ ಕೈಮರ ಬಳಿ ನಡೆದಿದೆ. ಸರ್ಫರಾಜ್ ಎಂಬ ಯುವಕ ಮನಬಂದಂತೆ ಕಾರನ್ನು ಚಲಾಯಿಸಿದ್ದು, ಪರಿಣಾಮ ಓರ್ವ ಬಾಲಕನ ಕಾಲು ಮುರಿತವಾಗಿದ್ದು, ಐದಾರು ವಾಹನಗಳು ಜಖಂ ಆಗಿವೆ. ಆದರೂ ಯುವಕ ಕಾರು ಚಲಾಯಿಸಲು ಮುಂದಾಗಿದ್ದು, ಬಳಿಕ ಸ್ಥಳೀಯರು ರಸ್ತೆಗೆ ಟ್ರಾಕ್ಟರ್ ಅನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದು, ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










