ಚಿಕ್ಕಮಗಳೂರು : ನಿಯಂತ್ರಣ ತಪ್ಪಿ ಎತ್ತಿನಗಾಡಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗದ ಸುಪ್ರಸಿದ್ಧ ಅಂತರಘಟ್ಟೆ ಜಾತ್ರೆ ಮುಗಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎರಡು ಎತ್ತಿನಗಾಡಿ ಚಾಲಕರು ವೇಗವಾಗಿದ್ದ ಎತ್ತಿನ ಬಾಲವನ್ನು ತಿರುವಿ ಎತ್ತುಗಳನ್ನು ಬೆದರಿಸಿದ್ದು, ಪರಿಣಾಮ ವೇಗದಲ್ಲಿದ್ದ ಎತ್ತುಗಳು ಗಾಬರಿಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಕಾರಿನ ಮೇಲಿಂದ ಹಾರಿ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ನೊಗದ ಹಗ್ಗಕ್ಕೆ ಸಿಲುಕಿ ಪಲ್ಟಿ ಹೊಡೆದಿದ್ದ ಎತ್ತುಗಳನ್ನು ಸ್ಥಳಿಯರು ಕುಣಿಕೆಯಿಂದ ಬಿಡಿಸಿ ರಕ್ಷಣೆ ಮಾಡಿದ್ದು, ಕಾರಿನ ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಅದೃಷ್ಟಾವಶಾತ್ ಎತ್ತಿನ ಗಾಡಿಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.










