ಜೆಡಿಎಸ್ ಹಿರಿಯ ಮುಖಂಡ ಡಿ.ಆರ್. ಉಮಾಪತಿ ಇನ್ನಿಲ್ಲ…

1240

ಮೂಡಿಗೆರೆ: ಮಲೆನಾಡು ಭಾಗದ ಹಿರಿಯ ಜೆಡಿಎಸ್ ಮುಖಂಡರಾದ ಡಿ.ರ್. ಉಮಾಪತಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಡಿ.ರ್. ಉಮಾಪತಿ ಅವರು ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದರು.
ನಿಧನಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್‍ಸಿ ಎಸ್. ಎಲ್ .ಧರ್ಮೇಗೌಡ, ಎಸ್. ಎಲ್ .ಭೋಜೇಗೌಡ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕಿ ಮೋಟಮ್ಮ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ರಂಜನ್ ಅಜಿತ ಕುಮಾರ್, ತಾ.ಪಂ.ಅಧ್ಯಕ್ಷ ಕೆ.ಸಿ ರತನ್, ಕೆ.ಜೆ.ಯು ರಾಜ್ಯ  ಕಾರ್ಯದರ್ಶಿ ಕೆಸವಳಲು ರಾಘವೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕುಮಾರ್ ಪತ್ರಕರ್ತರಾದ ಸುಧೀರ್ ಮೊದಲಮನೆ,  ತಾನು ಕೊಟ್ಟಿಗೆಹಾರ , ಸಂತೋಷ ಅತ್ತಿಗೆರೆ ,ಜೆಡಿಎಸ್ ಯುವ ಮುಖಂಡರಾದ ವಿನಯ್ ರಾಜ್ ,ಬಾಳೂರು ಆದರ್ಶ,ಅಕ್ಷತ್ ಪಟ ದೂರು  ,ಬಿಜೆಪಿ ಮುಖಂಡರಾದ ಜನ್ನಾಪುರ  ರಘು ವಿನೋದ ಕಣಚೂರು,  ತರುವೆ ಆದರ್ಶ , ಕಾಂಗ್ರೆಸ್ ಮುಖಂಡರಾದ ಬಿದರಳ್ಳಿ ಜಯರಾಮ್ ,ಅನಂತ ಎಂಸ್,  ಬ್ರಿಜೇಶ್ ಕಡಿದಾಳ್ಅವರುಗಳು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕೆಸವಳಲು ಎಸ್ಟೇಟ್‍ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.