ಆರು ತಿಂಗಳ ಹಸುಗೂಸನ್ನು ಮೋರಿಯಲ್ಲಿ ಬಿಸಾಡಿದ ಹೆತ್ತವರು-ಸಾರ್ವಜನಿಕರಿಂದ ರಕ್ಷಣೆ…

595
firstsuddi

ಮೈಸೂರು : ಆರು ತಿಂಗಳ ಹೆಣ್ಣು ಮಗುವನ್ನು ತನ್ನ ತಂದೆ ತಾಯಿ ಮೋರಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿದ್ಯಾರಣ್ಯಪುರಂ ಸೂಯೆಜ್ ಫಾರಂನ ಮೋರಿಯಲ್ಲಿ ಕಸ ಹಾಕುವ ಜಾಗದಲ್ಲಿ 6 ತಿಂಗಳ ಹಸುಗೂಸನ್ನು ಹೆತ್ತವರು ಬಿಸಾಡಿ ಹೋಗಿದ್ದರು. ಈ ವೇಳೆ ಮೋರಿಯಲ್ಲಿ ಮಗುವನ್ನು ಕಂಡ ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಸ್ಥಳೀಯರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದು, ಹಸುಗೂಸನ್ನು ಮೋರಿಗೆ ಬಿಸಾಡಿ ಹೋಗಿದ್ದ ಹೆತ್ತವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.