ಹಾಸನ : ಪ್ರಿಯತಮೆಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಸುತ್ತಾಡಿಸಬೇಕು ಎಂದು ಯಮಹಾ ಆರ್1 ಬೈಕ್ ಕದ್ದು ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಶ್ರವಣಬೆಳಗೊಳದಲ್ಲಿ ನಡೆದಿದೆ. ಬಂಧಿತನನ್ನು ಆಲೂರು ತಾಲ್ಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ನಿವಾಸಿ ಪ್ರಮೋದ್(19) ಎಂದು ಗುರುತಿಸಲಾಗಿದ್ದು, ಬೈಕ್ ಮಾರಾಟಕ್ಕಿದೆ ಎಂದು ಒಎಲ್‍ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದ ಶ್ರವಣಬೆಳಗೊಳದ ಪುನೀತ್ ಎಂಬುವವರಿಗೆ ಫೋನ್ ಮುಖಾಂತರ ಬೈಕ್ ಖರೀದಿಸುವುದಾಗಿ ತಿಳಿಸಿ ಫೆ.9ರಂದು ಬೈಕ್ ಖರೀದಿಗೆಂದು ಶ್ರವಣಬೆಳಗೊಳಕ್ಕೆ ತೆರಳಿ ಟೆಸ್ಟ್ ಡ್ರೈವ್‍ಗೆಂದು ಬೈಕ್ ಮಾಲೀಕನ ಬಳಿ ಕೀ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದ. ಈ ಕುರಿತು ಬೈಕ್ ಮಾಲೀಕ ಪುನೀತ್ ಶ್ರವಣಬೆಳಗೊಳ ಠಾಣೆಯಲ್ಲಿ ಬೈಕ್ ಕಳ್ಳತನ ಆದ ಬಗ್ಗೆ ದೂರು ನೀಡಿದ್ದರು. ನಿನ್ನೆ ಹಾಸನದ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ಬೈಕ್ ಸಮೇತ ಪೊಲೀಸರು ಬಂಧಿಸಿದ್ದಾರೆ.










