ಪಾಕ್ ಪರ ಘೋಷಣೆ ಕೂಗಿದವರನ್ನು ಎನ್ಕೌಂಟರ್ ಮಾಡಿದವರಿಗೆ 10 ಲಕ್ಷ ರೂ ಬಹುಮಾನ : ಶ್ರೀರಾಮಸೇನೆ ಮುಖಂಡ.

180
firstsuddi

ಬಳ್ಳಾರಿ : ದೇಶದ್ರೋಹಿ ಹೇಳಿಕೆ ನೀಡಿದವರನ್ನು ಎನ್ಕೌಂಟರ್ ಮಾಡಿದವರಿಗೆ 10 ಲಕ್ಷ ರೂ ನೀಡುವುದಾಗಿ ಶ್ರೀರಾಮ ಸೇನೆಯ ಮುಖಂಡ ಸಂಜೀವ್ ಮರಡಿ ಅವರು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಹೊಸಪೇಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಾಕಿಸ್ತಾನ ಪರ ಜೈಕಾರ ಕೂಗುವುದು, ದೇಶದ್ರೋಹಿ ಹೇಳಿಕೆಯನ್ನು ನೀಡುವುದು ಕೆಟ್ಟ ವೈರಸ್ ಆಗಿದ್ದು, ಕ್ಯಾನ್ಸರ್‍ನಂತೆ ಹರಡುತ್ತಿದೆ. ಪಾಕ್ ಪರ ಜೈಕಾರ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬೇಡಿ. ಒಂದು ವೇಳೆ ಬಿಡುಗಡೆ ಮಾಡಿದರೆ ನಾವೇ ಅವಳನ್ನು ಎನ್ಕೌಂಟರ್ ಮಾಡುತ್ತೇವೆ. ಇಲ್ಲವೇ ಬೇರೆ ಯಾರಾದರೂ ಎನ್ಕೌಂಟರ್ ಮಾಡಿದರೆ ಅವರಿಗೆ 10 ಲಕ್ಷ ರೂ ಹಣವನ್ನು ನೀಡುತ್ತೇವೆ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.