ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಮನೀಷ್ ಪಾಂಡೆ…

113
firstsuddi

ದಕ್ಷಿಣ ಕನ್ನಡ : ಟೀ ಇಂಡಿಯಾ ಆಟಗಾರ ಮನೀಷ್ ಪಾಂಡೆ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿನ್ನೆ ಆಗಮಿಸಿದ ಅವರು, ಇಂದು ಬೆಳಿಗ್ಗೆ ತುಳುನಾಡಿನ ಪ್ರಸಿದ್ಧ ನಾಗಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿರುವ ಈ ದೇವಾಲಯಕ್ಕೆ ತಮ್ಮ ಪತ್ನಿ ನಟಿ, ಆಶ್ರಿತಾ ಶೆಟ್ಟಿ ಹಾಗೂ ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿ ನಾಗದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದು, ಬಳಿಕ ಆದಿ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದರು.