ಸಾವಿನಲ್ಲೂ ಒಂದಾದ ತಾಯಿ-ಮಗ…

188
firstsuddi

ಹಾವೇರಿ : ಮಗನ ಸಾವಿನ ದುಃಖದಿಂದ ತಾಯಿಯು ಕೂಡಾ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. ಮೈನಾವತಿ ತೆಪ್ಪದ(50) ಹಾಗೂ ಬಸವರಾಜ್ ತೆಪ್ಪದ(31) ಮೃತ ತಾಯಿ-ಮಗ ಎಂದು ಗುರುತಿಸಲಾಗಿದೆ. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಬಸವರಾಜ್ ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದರು. ಮಗ ಮೃತಪಟ್ಟ ದುಃಖದಿಂದ ನಿನ್ನೆ ರಾತ್ರಿಯಿಂದ ತಾಯಿ ಮೈನಾವತಿ ಅವರು ಕಣ್ಣೀರಿಟ್ಟಿದ್ದರು. ಇದರ ಪರಿಣಾಮ ತಾಯಿ ಇಂದು ಬೆಳಿಗ್ಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ತಾಯಿ-ಮಗನ ಈ ಪ್ರೀತಿಗೆ ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದೆ.