18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧರಿಗೆ ಅದ್ದೂರಿ ಸ್ವಾಗತ…

168
firstsuddi

ಹುಬ್ಬಳ್ಳಿ : 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತವರಿಗೆ ಮರಳಿದ ಯೋಧರಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು. ಯಲ್ಲಾಪುರ ತಾಲ್ಲೂಕಿನ ಮುಂಡಗೋಡದ ಸೋಮಶೇಖರ್ ಅಗಡಿ ಹಾಗೂ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಾರುತಿ ಬಂಡಿವಡ್ಡರ್ ಎಂಬ ಯೋಧರು ದೇಶದ ಜಮ್ಮು ಕಾಶ್ಮೀರ, ಕೇರಳ, ಅಸ್ಸಾಂ, ಸಿಯಾಚಿನ್ ಸೇರಿದಂತೆ ವಿವಿಧ ಭಾಗಗಳಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತವರಿಗೆ ಬಂದಿದ್ದು, ಅವರನ್ನು ರೈಲ್ವೆ ನಿಲ್ದಾಣದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹಾಗೂ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳ ನೇತೃತ್ವದಲ್ಲಿ ಯೋಧರನ್ನು ಸ್ವಾಗತಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.