ಬಳ್ಳಾರಿ : ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ 4 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರೇಹಡಗಲಿ ಸಮೀಪದ ಕತ್ತೆಬೆನ್ನೂರು ಗ್ರಾಮದ ಬಳಿ ನಡೆದಿದೆ. ದಾಸಹನಹಳ್ಳಿ ಮೂಲದ ಸೊಪ್ಪನ ಸುನಿತಾ(30), ವೀರಣ್ಣ ಜಕ್ಕಣ್ಣನವರ(35), ಅಂಗಡಿ ಗೀತಾ(40) ಹಾಗೂ ಹೆಗ್ಗಜ್ಜರ ಕಾಳಮ್ಮ(50) ಎಂದು ಗುರುತಿಸಲಾಗಿದ್ದು, ಮೃತರು ಹೂವಿನ ಹಡಗಲಿಯ ತಮ್ಮ ಸಂಬಂಧಿಕರ ಮದುವೆ ಸಮಾರಂಭವನ್ನು ಮುಗಿಸಿಕೊಂಡು ದಾಸನಹಳ್ಳಿಗೆ ವಾಪಸ್ಸಾಗುತ್ತಿದ್ದ ವೇಳೆ ಟ್ರ್ಯಾಕ್ಟರ್‍ನ ಆಕ್ಸೆಲ್ ತುಂಡಾಗಿ ಮುಂದಿನ ಎರಡು ಚಕ್ರಗಳು ಬೇರ್ಪಟ್ಟು ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ 7 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಹೂವಿನ ಹಡಗಲಿ ಮತ್ತು ಹರಪ್ಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಹಿರೇಹಡಗಲಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










