ಕಲಬುರಗಿ : ಲಾಕ್‍ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರಿಗೆ ರಸ್ತೆ ಗುಡಿಸುವ ಶಿಕ್ಷೆ…

188
firstsuddi

ಕಲಬುರಗಿ : ಇಡೀ ಭಾರತದಲ್ಲೇ ಲಾಕ್‍ಡೌನ್ ಆದೇಶವಿದ್ದರೂ ಆದೇಶವನ್ನು ಉಲ್ಲಂಘಿಸಿ ರಸ್ತೆಗೆ ಇಳಿದವರಿಗೆ ಕಲಬುರಗಿ ಪೊಲೀಸರು ವಿಶೇಷವಾಗಿ ಶಿಕ್ಷೆಯನ್ನು ನೀಡಿದ್ದಾರೆ. ನಿಯಮವನ್ನು ಉಲ್ಲಂಘಿಸಿ ರಸ್ತೆಗಿಳಿದವರಿಗೆ ನಿನ್ನೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಇಂದು ಆದೇಶವನ್ನು ಪಾಲಿಸದೆ ರಸ್ತೆಗೆ ಇಳಿದವರ ಕೈಗೆ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ಇಡೀ ದೇಶದಾಧ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ವೈರಸ್ ತಡೆಗಟ್ಟಲು ಭಾರತವನ್ನು ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೂ ನಿಯಮವನ್ನು ಪಾಲಿಸದೆ ಅನಗತ್ಯವಾಗಿ ಹೊರಗಡೆ ತಿರುಗಾಡುತ್ತಿರುವವರಿಗೆ ಕೆಲವು ಪೊಲೀಸರು ಲಾಠಿ ಏಟು ನೀಡುತ್ತಿದ್ದು, ಇದಕ್ಕೂ ಬಗ್ಗದ ಸಾರ್ವಜನಿಕರಿಗೆ ಇಂದು ಪೊಲೀಸರು ಕೈಗೆ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಸ್ವಚ್ಛ ಮಾಡಿಸಿದ್ದಾರೆ.