ಇಟಲಿಯಲ್ಲಿ ಕೊರೊನಾ ವೈರಸ್‍ಗೆ ಈವರೆಗೆ 11,591 ಮಂದಿ ಬಲಿ…

199
firstsuddi

ರೋಮ್ : ಇಟಲಿಯಲ್ಲಿ ಕೊರೊನಾ ವೈರಸ್ ಮರಣ ಮೃದಂಗವನ್ನೇ ಭಾರಿಸುತ್ತಿದ್ದು, ನಿನ್ನೆ ಒಂದೇ 812 ಮಂದಿ ಬಲಿಯಾಗಿದ್ದು, ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 11,591ಕ್ಕೆ ಏರಿಕೆಯಾಗಿದೆ. ಅಲ್ಲದೇ 1,01,739 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಚೀನಾದಿಂದ ಆರಂಭವಾದ ಕೊರೊನಾ ವೈರಸ್‍ಗೆ ಚೀನಾ ದೇಶಕ್ಕಿಂತ ಇಟಲಿಯಲ್ಲೇ ಅತೀ ಹೆಚ್ಚು ಮಂದಿ ಬಲಿಯಾಗಿದ್ದು, ಚೀನಾದಲ್ಲಿ 3,308 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ವಿಶ್ವದಾಧ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ವಿಶ್ವದಾಧ್ಯಂತ ಒಟ್ಟು 36,211 ಮಂದಿ ಮೃತಪಟ್ಟಿದ್ದು, 7,55,591 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.