ಉಡುಪಿ ಜಿಲ್ಲೆಗೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳ ನೆರವು ನೀಡಿದ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ.

133
firstsuddi

ಉಡುಪಿ: ಮಾರಕ ಕೊರೋನಾ ಸೋಂಕು ನಿಯಂತ್ರಿಸಲು ಉಡುಪಿ ಜಿಲ್ಲೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ನೆರವು ನೀಡಿದ್ದಾರೆ. ಕೊರೋನಾ ಸೋಂಕು ನಿಗ್ರಹ ಹಾಗೂ ಪರೀಕ್ಷೆಗೆ ಅನುಕೂಲವಾಗುವಂತೆ 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಉಡುಪಿ ಜಿಲ್ಲೆಗೆ ಸುಧಾ ಮೂರ್ತಿಯವರು ದೇಣಿಗೆಯಾಗಿ ನೀಡಿದ್ದಾರೆ. ಜಿಲ್ಲಾಡಳಿತದ ಕರೆಗೆ ಸುಧಾ ಮೂರ್ತಿ ಸ್ಪಂದಿಸಿದ್ದು,24 ಗಂಟೆಗಳಲ್ಲಿ 54 ಲಕ್ಷ ರೂಪಾಯಿ ಮೌಲ್ಯದ ನಿರ್ಣಾಯಕ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿದೆ. ವೈದ್ಯಕೀಯ ಸಾಮಾಗ್ರಿಗಳಲ್ಲಿ 4000 ಎನ್ 95 ಮಾಸ್ಕ್, 4000 ಸ್ಯಾನಿಟೈಸರ್, 25000 ಟ್ರಿಪ್ಪಲ್ ಲೇಯರ್ ಮಾಸ್ಕ್, 10000 ಸರ್ಜಿಕಲ್ ಗ್ಲೌಸ್, 1500 ಪಿಪಿಇ ಕಿಟ್ ಗಳನ್ನು ನೀಡಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.