ಮತ್ತಷ್ಟು ಬಿಗಿಯಾದ ಮೂಡಿಗೆರೆ ಪೊಲೀಸರು…

1832
firstsuddi

ಮೂಡಿಗೆರೆ : ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಪೊಲೀಸರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಅನಗತ್ಯ ಜನದಟ್ಟಣೆ ಹಾಗೂ ವಾಹನ ಸಂಚಾರ ಕಡಿಮೆ ಮಾಡುವಲ್ಲಿ ದಿನ ಕಳೆದಂತೆ ಹೊಸ ಯೋಜನೆಗಳ ರೂಪಿಸುತ್ತಿದ್ದಾರೆ. ಅದರಂತೆ ದಿನಬಳಕೆ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ನೀಡಿದ್ದು, ಪಟ್ಟಣದ ಹ್ಯಾಂಡ್‍ಪೋಸ್ಟ್ ಸರ್ಕಲ್, ಕೊಲ್ಲಿಬೈಲ್ ಸರ್ಕಲ್ ಹಾಗೂ ಬಸ್‍ಸ್ಟಾಂಡ್ ಸರ್ಕಲ್‍ನಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದು, ವಿನಾಕಾರಣ ಸಂಚರಿಸುವ ವಾಹನಗಳನ್ನು ವೃತ್ತ ನಿರೀಕ್ಷಕ ಜಗನ್ನಾಥ್ ಮತ್ತು ಅವರ ತಂಡ ತಡೆಯೊಡ್ಡಿ ಕಾರಣವಿಲ್ಲದೆ ವಾಹನದಲ್ಲಿ ತಿರುಗಾಡಿದರೆ ಜಪ್ತಿ ಮಾಡುವ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ತಹಶೀಲ್ದಾರ್ ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣೇಗೌಡ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೇ ಬೇಸರವಿಲ್ಲದೆ ದುಡಿಯುತ್ತಿರುವ ವಿವಿಧ ಹಂತದ ನರ್ಸ್‍ಗಳು ಹಾಗೂ ವೈದ್ಯರ ಕರ್ತವ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.