ಹೆಬ್ಬಾಳದ ರುದ್ರಭೂಮಿಯಲ್ಲಿ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಂತ್ಯಸಂಸ್ಕಾರ…

333
firstsuddi

ಬೆಂಗಳೂರು : ನಿನ್ನೆ ಅನಾರೋಗ್ಯದಿಂದ ನಿಧನರಾಗಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಸಂಸ್ಕಾರವನ್ನು ಇಂದು ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರು ನಿನ್ನೆ ಮಧ್ಯಾಹ್ನ ನಿಧನರಾಗಿದ್ದರು. ಬುಲೆಟ್ ಪ್ರಕಾಶ್ ಅವರ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಇರಿಸಿ ತಮ್ಮ ನಿವಾಸದಿಂದ ಹೆಬ್ಬಾಳದ ರುದ್ರಭೂಮಿಗೆ ತರಲಾಯಿತು. ದೇಶಾದ್ಯಂತ ಕೊರೊನಾ ಭೀತಿ ಇರುವ ಹಿನ್ನೆಲೆ, ಹೆಚ್ಚು ಮಂದಿ ಸೇರಲು ಅವಕಾಶ ಇಲ್ಲದೇ ಇರುವುದರಿಂದ ಅಂತ್ಯಸಂಸ್ಕಾರದಲ್ಲಿ ಬುಲೆಟ್ ಪ್ರಕಾಶ್ ಅವರ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ತಂದೆಯ ಅಂತಿಮ ವಿಧಿ ವಿಧಾನವನ್ನು ಮಗ ರಕ್ಷಕ್ ಅವರು ನೆರವೇರಿಸಿದ್ದು, ಮಡಿವಾಳ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.