ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 116 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ನಲ್ಲಿ ಉಡುಪಿ ಜಿಲ್ಲೆಯೊಂದರಲ್ಲೇ 25 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಮಂಡ್ಯ-15, ಹಾಸನ-13, ಬೆಂಗಳೂರು-6, ಉತ್ತರ ಕನ್ನಡ-9, ದಕ್ಷಿಣ ಕನ್ನಡ-6, ಬಳ್ಳಾರಿ-11 ಶಿವಮೊಗ್ಗ-6, ಬೆಳಗಾವಿ-5, ಧಾರವಾಡ-5, ಚಿಕ್ಕಬಳ್ಳಾಪುರ-2, ಗದಗ-2, ಮೈಸೂರು-1, ವಿಜಯಪುರ-1 ಕೊರೊನಾ ಪ್ರಕರಣ ಪತ್ತೆಯಾಗಿದೆ.










