ಕೊಟ್ಟಿಗೆಹಾರ : ಕೊರೊನಾ ಸೋಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೆಸಾರ್ಟ್ ಹೋಂಸ್ಟೇ ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂದ ಹೇರಬೇಕು ಎಂದು ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ, ಬಲಿಗೆ, ಸುತ್ತಮುತ್ತಲ್ಲಾ ಗ್ರಾಮಸ್ಥರು ಒತ್ತಾಯಿಸಿದರು.
ಬುಧವಾರ ದುರ್ಗದಹಳ್ಳಿಯಿಂದ ಕಾಲ್ನಡಿಗೆ ಜಾಥಾ ಹೊರಟ ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ, ಬಲಿಗೆ, ಸುತ್ತಮುತ್ತಲ್ಲಾ ಗ್ರಾಮಸ್ಥರು ಸುಂಕಸಾಲೆ ಗ್ರಾ.ಪಂಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಗ್ರಾ.ಪಂ ಅಧ್ಯಕ್ಷ ಡಿ.ವೈ ಮಹೇಶ್, ಲಾಕ್ ಡೌನ್ ಸಡಿಲಿಕೆಯಿಂದಾಗಿ ಸುಂಕಸಾಲೆ, ದುರ್ಗದಹಳ್ಳಿ, ಮಧುಗುಮಡಿ, ಬಲಿಗೆ ಗ್ರಾಮಗಳ ರೆಸಾರ್ಟ್ ಹೋಂಸ್ಟೇ, ಹಾಗೂ ಬಲ್ಲಾಳರಾಯನ ದುರ್ಗಕ್ಕೆ ನೆರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಹೆಚ್ಚಾಗಿ ಬರುತ್ತಿದ್ದು ಕರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಈ ಭಾಗದ ರೆಸಾರ್ಟ್, ಹೋಂಸ್ಟೇ ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು ಎಂದರು.
ಸಿಪಿಐ ಮುಖಂಡ ರವಿ ಮಾತನಾಡಿ ಸರ್ಕಾರ ಇತ್ತೀಚೇಗೆ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಪ್ರವಾಸಿ ತಾಣವಾದ ಬಲ್ಲಾಳರಾಯನ ದುರ್ಗ ಹಾಗೂ ರೆಸಾರ್ಟ್ ಹೋಂಸ್ಟೇಗಳಿಗೆ ಪ್ರವಾಸಿಗರು ಬರುತ್ತಿದ್ದು ಮೋಜು ಮಸ್ತಿಗಾಗಿ ಬರುವ ಪ್ರವಾಸಿಗಳಿಂದ ಕರೊನಾ ಹರಡುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರ ಆತಂಕ್ಕೆ ಕಾರಣವಾಗಿದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಅತಿವೃಷ್ಟಿ ಹಾಗೂ ಕರೊನಾ ಒಮ್ಮೆಲ ಬಂದರೆ ನಿಯಂತ್ರಿಸುವುದು ಕಷ್ಟ. ಆದರೆಇಂದ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸುಂಕಸಾಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಡಿ.ವೈ ದಿನೇಶ್ ಮಾತನಾಡಿ, ಸುಂಕಸಾಲೆ ಬಿಎಸ್ಎನ್ಎಲ್ ಟವರ್ ಕಳೆದ ಹಲವಾರು ವರ್ಷದಿಂದ ನೆಟ್ವರ್ಕ್ ಸಮಸ್ಯೆ ಇದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಸುಂಕಸಾಲೆ, ದುರ್ಗದಹಳ್ಳಿ, ಮದುಗುಂಡಿ, ಬಲಿಗೆ ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರವನ್ನು ಕೂಡಲೇ ನೀಡಬೇಕು. ಜಮೀನು ಕಳೆದುಕೊಂಡಿರುವವರಿಗೆ ಪುನರ್ವಸತಿ ಕಲ್ಪಿಸಬೇಕು. ಗ್ರಾಮಗಳ ರಸ್ತೆ ಅಬಿವೃದ್ದಿ ಕಾರ್ಯ ಕುಂಟುತ್ತಾ ಸಾಗಿದ್ದು ಕಾಮಗಾರಿ ಶೀಘ್ರವಾಗಿ ನಡೆಸಬೇಕು. ಹಾಗೂ ಸುಂಕಸಾಲೆ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು ಎಂದರು.
ಈ ಸಂದರ್ಭದಲ್ಲಿ ರಘು ,ಸುಬ್ಬರಾಯ, ಸುಧಾಕರ್, ಭರತ್, ಅಜಿತ್, ಶರತ್, ಬಾಳೂರು ಪಿಎಸ್ಐ ಮೂರ್ತಿ, ಎಎಸ್ಐ ಹನುಮಂತಪ್ಪ, ಸುಂಕಸಾಲೆ ಗ್ರಾ.ಪಂ ಅಧ್ಯಕ್ಷ ಪ್ರೇಮ್ದಿವಾಕರ್, ಪಿಡಿಓ ಪದ್ಮರಾಜ್ ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ರೆಸಾರ್ಟ್ ಹೋಂಸ್ಟೇಗಳಿಗೆ ಬರುವ ಪ್ರವಾಸಿಗರಿಗೆ ನಿರ್ಬಂದ ಹೇರಿ : ಸುಂಕಸಾಲೆ ಗ್ರಾಮಸ್ಥರ ಒತ್ತಾಯ…










