ಮೂಡಿಗೆರೆ : ನಾಳೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಪ್ರವೇಶ ಅವಕಾಶ…

225
firstsuddi

ಮೂಡಿಗೆರೆ: ಪ್ರಸಿದ್ಧ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಜುಲೈ-1 ಬುಧವಾರದಿಂದ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನ, ಪೂಜೆ ಮತ್ತು ವಾಸ್ತವ್ಯಕ್ಕೆ ಅವಕಾಶ ಇರುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಪಡೆದುಕೊಂಡು ಬಂದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೇವಸ್ಥಾನದ ನಿಭಂದನೆಗಳಿಗೆ ಒಳಪಟ್ಟು ದರ್ಶನ ಪೂಜೆ, ಪ್ರಸಾದವನ್ನು ಪಡೆಯಲು ಅವಕಾಶ ಇರುತ್ತದೆ. ಬೆಳಗ್ಗೆ7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮಾತ್ರ ದರ್ಶನಕ್ಕೆ ಅನುಮತಿ ಇರುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಭಕ್ತಾದಿಗಳು ಮಾಸ್ಕ್, ಸ್ಯಾನಿಟೈಸರ್ ಬಳಸುವುದರ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತಮ್ಮ ಆರೋಗ್ಯದ ಜೊತೆಗೆ ಸಾರ್ವಜನಿಕರ ಆರೋಗ್ಯದ ಕಾಳಜಿ ಇಟ್ಟುಕೊಂಡು ಶುದ್ಧ ಮನಸ್ಥಿತಿಯಿಂದ ದೇವಸ್ಥಾನಕ್ಕೆ ಬರಬೇಕು. ಟಿಕೆಟ್ ಬುಕ್ ಮಾಡುವಾಗ ವೆಬ್‍ಸೈಟಿನಲ್ಲಿ ಇರುವ ನಿಭಂದನೆಗಳನ್ನು ನೋಡಿಕೊಂಡು ದರ್ಶನ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.