ಕಾರವಾರ: ಗಂಟಲಲ್ಲಿ ಸಮೋಸಾ ಸಿಲುಕಿ ಬೌದ್ಧ ಬಿಕ್ಕು ಸಾವು…

154
firstsuddi

ಕಾರವಾರ: ಗಂಟಲಲ್ಲಿ ಸಮೋಸಾ ಸಿಲುಕಿ ಬಿಕ್ಕು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ. ಮೃತ ಬಿಕ್ಕುವನ್ನು ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಎಂದು ಗುರುತಿಸಲಾಗಿದೆ. ಇವರು ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದರು. ನಿನ್ನೆ ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುವಾಗ ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಬಿಕ್ಕಳಿಕೆಯಿಂದ ಉಸಿರಾಡಲು ಸಾಧ್ಯವಾಗದೇ ಬಿಕ್ಕು ಮೃತಪಟ್ಟಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.