ಉಡುಪಿ : ಕೊರೊನಾ ಭೀತಿ-ಐಸೋಲೇಷನ್‍ನಲ್ಲಿದ್ದ ವೃದ್ಧ ಆತ್ಮಹತ್ಯೆಗೆ ಶರಣು…

136
firstsuddi

ಉಡುಪಿ : ಕೊರೊನಾ ಭೀತಿಯಿಂದ ಐಸೋಲೇಷನ್‍ನಲ್ಲಿದ್ದ ವೃದ್ಧರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪ್ರಭಾಕರ್ ಪುತ್ರನ್(62) ಆತ್ಮಹತ್ಯೆ ಮಾಡಿಕೊಂಡ ವೃದ್ಧ ಎಂದು ಗುರುತಿಸಲಾಗಿದ್ದು, ಮೃತ ವೃದ್ಧನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ಜು.5ರಂದು ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೃದ್ಧ ತನಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆ ಬಳಿಕ ಬಂದ ವೃದ್ಧನ ಕೊರೊನಾ ವರದಿ ನೆಗೆಟಿವ್ ಬಂದಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.