ಮೂಡಿಗೆರೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿ ಮಹಮ್ಮದ್ ಮುಝಮಿಲ್ಲ್ ಗೆ ಮ್ಯಾನ್ ಕೈಂಡ್ ಸಂಸ್ಥೆಯಿಂದ ಸನ್ಮಾನ…

676
firstsuddi

ಕೊಟ್ಟಿಗೆಹಾರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ಅಂಕ ಪಡೆದು ಉತೀರ್ಣರಾದ ಮೂಡಿಗೆರೆಯ ಸಂತ ಮಾರ್ಥಸ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಮುಝಮಿಲ್ಲ್ ಅವರಿಗೆ ಬಣಕಲ್‍ನ ಮ್ಯಾನ್ ಕೈಂಡ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿ ಮಹಮ್ಮದ್ ಮುಝಮಿಲ್ಲ್ ಬಣಕಲ್‍ನ ಇಬ್ರಾಹಿಂ ಮತ್ತು ಉಮಯಾ ಭಾನು ದಂಪತಿಗಳ ಪುತ್ರ.
ಈ ಸಂದರ್ಭದಲ್ಲಿ ಮ್ಯಾನ್ ಕೈಂಡ್ ಕ್ಲಬ್‍ನ ಸಾಜಿದ್, ಮಾಹಿತಿ ಹಕ್ಕು ಕಾರ್ಯಕರ್ತ ಪ್ರಭಾಕರ್ ಬಿನ್ನಡಿ, ಸ್ಥಳೀಯರಾದ ಖಾದರ್ ಮುಂತಾದವರು ಇದ್ದರು.