ಬೆಡ್ ಸಿಗದೆ ಆಂಬುಲೆನ್ಸ್ ನಲ್ಲೇ 6 ದಿನದ ಕೊರೊನಾ ಸೋಂಕಿತೆ ಬಾಣಂತಿ ಸಾವು…

138
firstsuddi

ಬೆಂಗಳೂರು : ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಆಂಬುಲೆನ್ಸ್ ನಲ್ಲೇ 26 ವರ್ಷದ ಕೊರೊನಾ ಸೋಂಕಿತೆ ಬಾಣಂತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಮೃತ ಬಾಣಂತಿ ಕಳೆದ 6 ದಿನಗಳ ಹಿಂದೆ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳುತ್ತಿದ್ದಂತೆ ಬಾಣಂತಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಬಾಣಂತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ ಬಾಣಂತಿಗೆ ಆಂಟಿಜೆನ್ ಪರೀಕ್ಷೆ ಮಾಡಿದಾಗಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಬಳಿಕ ಬಾಣಂತಿಯನ್ನು ಚಿಕಿತ್ಸೆಗೆಂದು ಆಂಬುಲೆನ್ಸ್‍ನಲ್ಲಿ ಕರೆದುಕೊಂಡು ಹೋಗಿದ್ದರು. ಆದರೆ ನಿನ್ನೆ ಸಂಜೆಯಿಂದ ಬಾಣಂತಿಯನ್ನು ಕರೆದುಕೊಂಡು ನಗರದ ವಿವಿಧ ಆಸ್ಪತ್ರೆಗೆ ಸುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿಗಳು ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಳಿಕ ಬಾಣಂತಿಯ ಕುಟುಂಬಸ್ಥರು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಕರೆ ಮಾಡಿ ಶಿಫಾರಸ್ಸನ್ನು ಪಡೆದು ಬೊಮ್ಮಸಂದ್ರದ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಿಸಲು ಆಗಮಿಸಿದ್ದರು. ಆದರೆ ಬಾಣಂತಿ ಅಷ್ಟೊತ್ತಿಗಾಗಲೆ ಆಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗಳ ಈ ನಿರ್ಲಕ್ಷತನದಿಂದ 6 ದಿನದ ಕಂದಮ್ಮ ತಾಯಿಯನ್ನು ಕಳೆದುಕೊಳ್ಳಕಾಯಿತು.