ಕೊಟ್ಟಿಗೆಹಾರ : ಮಾಡುವ ಕಾಯಕದಲ್ಲಿ ಸೇವಾ ಮನೋಭಾವ ಇದ್ದಾಗ ಸೇವೆಯಿಂದ ನಿವೃತ್ತರಾದರೂ ಕೀರ್ತಿ ಉಳಿಯುತ್ತದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ಸಂಘದಿಂದ ನಡೆದ ನಿವೃತ್ತ ಬಿಎಸ್‍ಎನ್‍ಎಲ್ ಉದ್ಯೋಗಿ ಕೆ.ಪಿ ರಾಮಚಂದ್ರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಂಕಸಾಲೆ, ಬಣಕಲ್, ಮೂಡಿಗೆರೆ ದೂರವಾಣಿ ಕೇಂದ್ರದಲ್ಲಿ 29 ವರ್ಷಗಳ ಪ್ರಾಮಾಣಿಕ ಸೇವೆ ನೀಡಿ ಜನಮನ್ನಣೆ ಗಳಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ಕಾರ್ಯ 3 ದಶಕಗಳ ಹಿಂದೆ ಸವಾಲಿನ ಕಾರ್ಯವಾಗಿತ್ತು. ಅದನ್ನು ಉತ್ತಮವಾಗಿ ನಿಭಾಯಿಸಿ ಉತ್ತಮ ಸೇವೆ ನೀಡುವುದರ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ನಿವೃತ್ತಿ ಜೀವನವೂ ಸುಖಕರವಾಗಿರಲಿ ಎಂದರು.
ಬಿಎಸ್‍ಎನ್‍ಎಲ್ ಉದ್ಯೋಗಿ ಕೆ.ಪಿ ರಾಮಚಂದ್ರ ಅವರನ್ನು ಪತ್ರಕರ್ತರಾದ ಅನಿಲ್ ಮೊಂತೆರೊ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸಂತೋಷ್ ಅತ್ತಿಗೆರೆ, ಅನಿಲ್ ಮೊಂತೆರೊ, ತನು ಕೊಟ್ಟಿಗೆಹಾರ, ನಂದೀಶ್ ಬಂಕೇನಹಳ್ಳಿ, ಸ್ಥಳಿಯರಾದ ಅಶ್ವಿನ್‍ಗೌಡ, ಮೇಘರಾಜ್, ಲೋಕೇಶ್ ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಸೇವೆಯಿಂದ ನಿವೃತ್ತರಾದ ಕೆ.ಪಿ ರಾಮಚಂದ್ರ ಅವರಿಗೆ ಪತ್ರಕರ್ತರ ಸಂಘದಿಂದ ಬೀಳ್ಕೊಡುಗೆ…










