ಕೊಟ್ಟಿಗೆಹಾರ : ಕೂವೆ ಗ್ರಾ.ಪಂ ವ್ಯಾಪ್ತಿಯ ಕಂಬಳಿಹರದಿಂದ ಹೊಳೆಕೂಡಿಗೆ ಸಂಪೂರ್ಣವಾಗಿ ಹದಗೆಟ್ಟ ರಸ್ತೆಯನ್ನು ಹೊಳೆಕೂಡಿಗೆ ಗ್ರಾಮಸ್ಥರು ದುರಸ್ಥಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೊಳೆಕೂಡಿಗೆ ಗ್ರಾಮಸ್ಥ ಸತೀಶ್‍ಗೌಡ, ಈ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ಕೂಡಿದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕೂಡ ರಸ್ತೆ ಅಭಿವೃದ್ದಿಗೆ ಮುಂದಾಗಿಲ್ಲ. ಇದರಿಂದಾಗಿ ಗ್ರಾಮಸ್ಥರೆ ರಸ್ತೆ ದುರಸ್ತಿ ಮಾಡಲು ಮುಂದಾಗಿದ್ದು ರಸ್ತೆಯ ಹೊಂಡಗುಂಡಿಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೃಷ್ಣಪ್ಪ, ಮೋಹನ್, ಸಂದೇಶ್, ಸಂತೋಷ್ ಇದ್ದರು.










