ಪೋಷಕರ ಕಣ್ಣೆದುರೇ ನದಿಗೆ ಹಾರಿ ಯುವತಿ ಆತ್ಮಹತ್ಯೆ…

177
firstsuddi

ವಿಜಯಪುರ : ಪೋಷಕರ ಕಣ್ಣೆದುರೇ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಧಾರವಾಡದ ನವಲಗುಂದ ಪಟ್ಟಣದ ನಿವಾಸಿ ಐಶ್ವರ್ಯ ಶ್ರೀಪಾಲ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಎಂದು ಗುರುತಿಸಲಾಗಿದೆ. ಯುವತಿ ತನ್ನ ಪೋಷಕರೊಂದಿಗೆ ಗಾಣಗಾಪುರ ದತ್ತಾತ್ರೆಯ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಕಲಬುರಗಿಯ ಅಫಜಲಪುರ ಬಳಿ ಭೀಮಾನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಬಳಿ ಬರುತ್ತಿದ್ದಂತೆ ಯುವತಿ ಕಾರು ನಿಲ್ಲಿಸಲು ಹೇಳಿದ್ದಾರೆ. ಬಳಿಕ ನಾನು ನದಿಗೆ ನಾಣ್ಯ ಹಾಕಬೇಕು ಎಂದು ಹೇಳಿ ಕಾರಿನಿಂದ ಇಳಿದು ಸೇತುವೆಯ ತುದಿಗೆ ತೆರಳಿ ನದಿಗೆ ಹಾರಿದ್ದಾರೆ. ಯುವತಿಯ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.