ಕಳಸ : ದುರ್ಗಾಮಂಟಪದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹದ ಜಲಸ್ತಂಬನಾ ಶೋಭಾಯಾತ್ರೆ…

103
firstsuddi

ಕಳಸ : ದುರ್ಗಾಮಂಟಪದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹದ ಜಲಸ್ತಂಬನಾ ಶೋಭಾಯಾತ್ರೆ ವಿಜ್ರಂಭಣೆಯಿಂದ ನಡೆಯಿತು.
ಕಳೆದ ಹತ್ತು ದಿನಗಳ ಕಾಲ ದುರ್ಗಾಮಂಟಪದಲ್ಲಿ ಪೂಜಾ ಪಾರಾಯಣ, ಅಷ್ಟೋತ್ತರ ಕುಂಕುಮಾರ್ಚನೆ, ಸಹಸ್ರ ನಾಮಾಚರಣೆ, ಹೂವಿನಪೂಜೆ, ದುರ್ಗಾಹೋಮ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ದೇವರ ಸನ್ನಿದಿಯಲ್ಲಿ ಚಂಡಿಕಾ ಪೂಜಾ, ಪಾರಾಯಣ ವಿವಿದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ದೇವಿಯ ವಿಗ್ರಹವನ್ನು ಸಿಂಗರಿಸಿದ ತೆರೆದ ವಾಹನದಲ್ಲಿ ಕುಳ್ಳಿರಿಸಿ ಕಳಸ ಮುಖ್ಯ ರಸ್ತೆಯ ಮುಖಾಂತರ ಭದ್ರಾ ನದಿಯ ಕೋಟಿ ತೀರ್ಥದಲ್ಲಿ ತೆಪ್ಪೋತ್ಸವದ ನಂತರ ದೇವರ ವಿಗ್ರಹವನ್ನು ವಿಸರ್ಜಿಸಲಾಯಿತು.
ಕೊರೊನ ದಿಂದ ಅದ್ದೂರಿ ಶೋಭಾಯಾತ್ರೆ ನಡೆಯದೆ ಸರಳ ರೀತಿಯಲ್ಲಿ ದೇವಿಯ ಶೋಭಾಯಾತ್ರೆಯನ್ನು ನಡೆಸಲಾಯಿತು.ರಸ್ತೆಯ ಇಕ್ಕೆಲಗಳಲ್ಲಿದ್ದ ಅಂಗಡಿ ಮುಂಗಟ್ಟು ಮನೆ ಮಾಲಿಕರು ದೇವಿಗೆ ಹಣ್ಣು ಕಾಯಿ ಸಮರ್ಪಿಸಿದರು.