ಕೊಟ್ಟಿಗೆಹಾರ : ಕೂವೆ ಗ್ರಾ.ಪಂ ವ್ಯಾಪ್ತಿಯ ಹೊಳೆಕುಡಿಗೆಯ ರೈತರಾದ ಕೃಷ್ಣ ಅವರ ಬಡವರ ಜಮೀನನ್ನು ಅರಣ್ಯ ಅಧಿಕಾರಿಗಳು ತೆರವುಗೊಳಿಸಿದ ಕ್ರಮ ಖಂಡನೀಯ ಎಂದು ಭೂರಹಿತ ಬಡವರ ಹೋರಾಟ ವೇದಿಕೆಯ ಅಧ್ಯಕ್ಷ ನವೀನ್ ಹಾವಳಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಕೃಷ್ಣ ಅವರ ಸರ್ವೆ ನಂಬರ್ 163 ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಕಾಫಿಗಿಡಗಳನ್ನು ಕಡಿದು ಹಾಕಿದ್ದು ಗುಡಿಸಿಲನ್ನು ತೆರವುಗೊಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಏಕಾಏಕಿ ನುಗ್ಗಿ ತೆರವುಗೊಳಿಸಿರುವುದು ಸರಿಯಲ್ಲ. ಜೊತೆಗೆ ಬಾಳೂರು ಠಾಣೆಯಲ್ಲಿ ದೂರು ನೀಡಿರುವುದು ಖಂಡನೀಯ ಎಂದರು.
ಅರಣ್ಯ ಇಲಾಖೆ ದೊಡ್ಡ ದೊಡ್ಡ ಎಸ್ಟೇಟ್ ಮಾಲೀಕರು ಮಾಡಿರುವ ನೂರಾರು ಎಕರೆ ಒತ್ತುವರಿಯನ್ನು ತೆರವುಗೊಳಿಸದೆ ಅರಣ್ಯ ಇಲಾಖೆ ಸಣ್ಣ ರೈತರನ್ನು ಗುರಿಯಾಗಿಸಿಕೊಂಡು ತಾರತಮ್ಯ ನೀತಿ ಅನುಸರಿಸುತ್ತಿದೆ. ಅರಣ್ಯ ಇಲಾಖೆ ಮೊದಲು ನೂರಾರು ಎಕರೆ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸಲಿ. ಸಣ್ಣ ರೈತರನ್ನು ಗುರಿಯಾಗಿಸಿಕೊಂಡು ನೆಟ್ಟ ಕಾಫಿಗಿಡಗಳನ್ನು ಕಡಿದು ಹಾಕುವ ಅರಣ್ಯ ಇಲಾಖೆಯ ವರ್ತನೆ ಅಮಾನವೀಯ ಎಂದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕೂವೆ ಗ್ರಾಮದ ರೈತರ ಜಮೀನನ್ನು ಅರಣ್ಯ ಅಧಿಕಾರಿಗಳು ತೆರವುಗೊಳಿಸಿದ ಕ್ರಮ ಖಂಡನೀಯ :...










